ತೇನಾರ್ಡ್, ಲೂಯಿ ಜಾಕ್		
1777-1857. ಬಡ ರೈತಕುಟುಂಬದಲ್ಲಿ ಜನಿಸಿ ಪ್ಯಾರಿಸ್ ವಿಶ್ವವಿದ್ಯಾಲಯದ ಕುಲಾಧಿಪತಿ (ಚಾನ್ಸಲರ್) ಪದವಿಗೆ ಏರಿದ ಮತ್ತು ಗೇ ಲುಸ್ಯಾಕ್‍ನೊಡನೆ ಮೂಲಭೂತ ಸಂಶೋಧನೆಗಳನ್ನು ನಡೆಸಿ ಬೋರಾನ್ ಧಾತುವನ್ನು ಅವಿಷ್ಕರಿಸಿ ಖ್ಯಾತಿ ಗಳಿಸಿದ ಫ್ರೆಂಚ್ ರಸಾಯನ ವಿe್ಞÁನಿ. ಲೂಯಿ ಜಾಕ್ ಈಶಾನ್ಯ ಫ್ರಾನ್ಸಿನ ಅಬ್ ಡಿಪಾರ್ಟ್‍ಮೆಂಟಿನಲ್ಲಿರುವ ಲೂಪ್ತಿಯೇ ಎಂಬಲ್ಲಿ 1777ರ ಮೇ 4 ರಂದು ಬಡ ರೈತಕುಟುಂಬದಲ್ಲಿ ಹುಟ್ಟಿದ. ಅತನ ತಂದೆ ಕಡುಬಡವನಾದರೂ ಬಲು ಕಷ್ಟಪಟ್ಟು ಮಗನಿಗೆ ವಿದ್ಯಾರ್ಜನೆ ಮಾಡಿಸಿದ. ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ರಸಾಯನ ವಿe್ಞÁನವನ್ನು ಅಭ್ಯಾಸ ಮಾಡುತ್ತಿದ್ದಾಗ ಮೂರು ವರ್ಷಕಾಲ ತೇನಾರ್ಡ್ ಅರೆಹೊಟ್ಟೆ ಊಟ, ಶಾಖ ಮತ್ತು ದೀಪಗಳಿಗೆ ಕೊರತೆಯಿದ್ದ ವಸತಿಗಳಲ್ಲಿ ವಾಸ. ಅ ಅವಧಿ ಮುಗಿದ ಬಳಿಕ ಅವನಿಗೆ ಹಿರಿಯ ರಸಾಯನ ವಿe್ಞÁನಿ ವೋಕ್ಲಾನನ ಸ್ನೇಹ ಲಭಿಸಿದ್ದೊಂದು ಸುಕೃತ. ಹದಿನಾಲ್ಕು ವರ್ಷ ಹಿರಿಯನಾಗಿದ್ದ ವೊಕ್ಲಾನ್ ತೇನಾರ್ಡ್‍ನಂತೆಯೇ ಬಡ ರೈತವರ್ಗದಲ್ಲಿ ಜನಿಸಿ ವಿದ್ಯಾರ್ಥಿದೆಸೆಯಲ್ಲಿ ಬಡತನದ ಕಷ್ಟವನ್ನು ಅನುಭವಿಸಿ ಮೇಲೆ ಬಂದಾಗ ಅದನ್ನು ಆತ ಮರೆತಿರಲಿಲ್ಲ; ತೇನಾರ್ಡ್ ಅಭಿವೃದ್ಧಿಗೆ ಬರಲು ತನ್ನ ಕೈಲಾದ ಎಲ್ಲ ನೆರವನ್ನೂ ನೀಡಿದ. ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಪ್ರಯೋಗಮಂದಿರ ಸಹಾಯಕ ಅಗಿ ಕೆಲಸಕ್ಕೆ ಸೇರಿದ ತೇನಾರ್ಡ್ ಉನ್ನತ ಮಟ್ಟದ ಸಂಶೋಧನೆಗಳಿಂದ ಖ್ಯಾತಿ ಗಳಿಸಿ ಸ್ವಲ್ಪ ಕಾಲದಲ್ಲಿಯೇ ಕಾಲೇಜ್ ಡಿ ಫ್ರಾನ್ಸನಲ್ಲಿ ಪ್ರಾಧ್ಯಾಪಕ ಪದವಿಗೇರಿದ. 1828ರಲ್ಲಿ ಫ್ರೆಂಚ್ ಚೇಂಬರ್ ಅಫ್ ಡೆಪ್ಯುಟೀಸ್‍ನ ಸದಸ್ಯವತ್ವವನ್ನುಗಳಿಸಿದ ತೇನಾರ್ಡ್‍ಗೆ ದೊರೆ ಹತ್ತನೆಯ ಚಾಲ್ರ್ಸ್ ಬ್ಯಾರನ್ ಪದವಿಯನ್ನು ನೀಡಿ ಪುರಸ್ಕರಿಸಿದ. ತೇನಾರ್ಡ್ ಎಂಟು ವರ್ಷಗಳ ತರುವಾಯ ಅತನ ತವರೂರಿಗೆ ಲೂಪ್ತಿಯೇ ತೇನಾರ್ಡ್ ಎಂದು ನಾಮಕರಿಸಿದರು.

ಫ್ರಾನ್ಸ್‍ನಲ್ಲಿ ಔದ್ಯನಿಕ ರಸಾಯನ ವಿe್ಞÁನದ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿದವರಲ್ಲಿ ಒಬ್ಬನಾದ ಷಾಪ್ತಾಲ್‍ನ ಕೋರಿಕೆಯಂತೆ ಅಲ್ಟ್ರಾಮೆರೀನ್‍ನಷ್ಟು (ಅಗಸರ ನೀಲಿ) ಹೊಳಪುಳ್ಳ, ಅದರೆ ಪಿಂಗಾಣಿ ಸಾಮಾನುಗಳ ತಯಾರಿಕೆಯಲ್ಲಿ ಬಳಸುವ ಕುಲುಮೆಯ ಉಷ್ಣತೆಯನ್ನು ತಡೆದುಕೊಳ್ಳಬಲ್ಲ. ವರ್ಣದ್ರವ ಒಂದನ್ನು ಬಳಸುವ ಶೋಧಿಸಲು ಪ್ರಯತ್ನಿಸಿದ ತೇನಾರ್ಡ್, ಇಂದು ತೇನಾರ್ಡ್‍ನ ನೀಲಿ ಎಂದು ಪ್ರಸಿದ್ಧವಾಗಿರುವ ವರ್ಣದ್ರವ್ಯವನ್ನು (ಅಲ್ಯುಮಿನಿಯಮ್ ಮತ್ತು ಕೋಬಾಲ್ಟ್‍ಗಳ ಅಕ್ಸೈಡುಗಳಿಂದ ಆದದ್ದು) ಅವಿಷ್ಕರಿಸಿ, ತನ್ನ ಬಡತನವನ್ನು ನೀಗಿಕೊಂಡ. ಅದರೆ ಇಂದಿ ರಸಾಯನ ಶಾಸ್ತ್ರದಲ್ಲಿ ತೇನಾರ್ಡ್‍ನ ಹೊಸರು ಚಿರಸ್ಥಾಯಿಯಾಗಿರುವುದು ಅವನ ಇತರ ಸಂಶೋಧನೆಗಳಿಂದ, ಮುಖ್ಯವಾದ ಗೇ ಲುಸ್ಯಾಕ್‍ನೊಡನೆ ಹಾಗೂ ಸ್ವಲ್ಪಮಟ್ಟಿಗೆ ಸ್ವತಂತ್ರವಾಗಿ ಶುದ್ಧರಸಾಯನ ವಿe್ಞÁನದಲ್ಲಿ ಅತ ಮಾಡಿರುವ ಸಂಶೋಧನೆಗಳಿಂದ.

ಕ್ಲೋರಿನ್ ಹಾಗೂ ಕ್ಷಾರ ಲೋಹಗಳನ್ನು (ಅಲ್ಕಲಿ ಮೆಟಲ್ಸ್) ಕುರಿತು ಲುಸ್ಯಾಕ್ ನಡೆಸುತಿದ್ದ ಸಂಶೋಧನೆಗಳಲ್ಲಿ ತೇನಾರ್ಡ್ ಪ್ರಮುಖ ಪಾತ್ರವಹಿಸಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಪರಾಕ್ಸೈಡ್‍ಗಳನ್ನು ಅವಿಷ್ಕರಿಸಿದ. ಕೀರ್ತಿ ಅವರಿಬ್ಬರಿಗೂ ಸಲ್ಲುತ್ತದೆ. ಕಾಸ್ಟಿಕ್ ಸೋಡ ಮತ್ತು ಕಾಸ್ಟಿಕ್ ಪೊಟ್ಯಾಷುಗಳಲ್ಲಿ ಹೈಡ್ರೋಜನ್ ಮತ್ತು ಅಕ್ಸಿಜನ್ನುಗಳೆರಡೂ ಇವೆ ಎಂಬುದನ್ನು ಅವರು ತೋರಿಸಿದರು. ಅದಕ್ಕಿಂತಲೂ ಹೆಚ್ಚಾಗಿ, ಬೋರಾನ್ ಅಕ್ಸೈಡನ್ನು ಪೊಟ್ಯಾಸಿಯಮ್ ಲೋಹದೊಂದಿಗೆ ಕಾರುವ ಮೂಲಕ ಬೊರಾನ್ ಧಾತುವನ್ನು ತಯಾರಿಸಿದರು. ಅದೇ ಪ್ರಯತ್ನದಲ್ಲಿದ್ದ ಸರ್ ಹಂಫ್ರಿ ಡೇವಿಯೂ ಸ್ವತಂತ್ರವಾಗಿ ಅದನ್ನು ಸಾಧಿಸಿದನಾದರೂ ಅತನ ಪ್ರಯೋಗ ಯಶಸ್ವಿಯಾದುದು ಒಂಬತ್ತು ದಿವಸಗಳಷ್ಟು ತಡವಾದ್ದರಿಂದ ಬೋರಾನ್ ಅವಿಷ್ಕಾರದ ಕೀರ್ತಿಗೇ ಲುಸ್ಯಾಕ್ ಮತ್ತು ತೇನಾರ್ಡ್‍ವರಿಗೆ ಸಲ್ಲುತ್ತದೆ.

ಹತ್ತು ವರ್ಷಗಳ ತರುವಾಯ ತೇನಾರ್ಡ್ ಸ್ವತಂತ್ರವಾಗಿ ಹೈಡ್ರೋಜನ್ ಪರಾಕ್ಸೈಡ್‍ನ್ನು ಅವಿಷ್ಕರಿಸಿ ಖ್ಯಾತಿ ಗಳಿಸಿದ.
1813-16ರ ಅವಧಿಯಲ್ಲಿ ಅವನು ರಚಿಸಿದ ನಾಲ್ಕು ಸಂಪುಟಗಳ ರಸಾಯನವಿe್ಞÁನದ ಪಠ್ಯಪುಸ್ತಕ ಬಲುಕಾಲದವರೆಗೂ ಒಂದು ಪ್ರಮಾಣಕ ಗ್ರಂಥವಾಗಿತ್ತು. 						(ಜೆ. ಆರ್. ಎಲ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ